Deprecated: Required parameter $uname follows optional parameter $slug in /home4/thincze7/public_html/Alma/application/models/Posts_model.php on line 419

Deprecated: Required parameter $uname follows optional parameter $slug in /home4/thincze7/public_html/Alma/application/models/Posts_model.php on line 456

Deprecated: Required parameter $uname follows optional parameter $slug in /home4/thincze7/public_html/Alma/application/models/Posts_model.php on line 481

Deprecated: Required parameter $uname follows optional parameter $slug in /home4/thincze7/public_html/Alma/application/models/Posts_model.php on line 494

Deprecated: Required parameter $uname follows optional parameter $slug in /home4/thincze7/public_html/Alma/application/models/Posts_model.php on line 519

Deprecated: Required parameter $uname follows optional parameter $slug in /home4/thincze7/public_html/Alma/application/models/Posts_model.php on line 532
Alma

ಟ್ರಂಪ್ ತಲೆಗೆ 575 ಕೋಟಿ ಘೋಷಿಸಿದ ಇರಾನ್ : ಆತಂಕ ಹೆಚ್ಚಿಸಿದ ಅಮೆರಿಕಾ ಅಧ್ಯಕ್ಷರ ಹೇಳಿಕೆ...

ತೆಹ್ರನ್ : ಇರಾನ್ ಸೇನಾ ಮುಖ್ಯಸ್ಥ ಖಾಸಿಂ ಸುಲೇಮನ್ ಹತ್ಯೆಯ ಬಳಿಕ ತಕ್ಕ ಪ್ರತೀಕಾರದ ಎಚ್ಚರಿಕೆ ನೀಡಿದ್ದ ಇರಾನ್ ಈಗ ಅಮೆರಿಕಾ ಅಧ್ಯಕ್ಷ 
ಟ್ರಂಪ್ ಅವರ ತಲೆಗೆ 575 ಕೋಟಿ ರೂಪಾಯಿ ಬಹುಮಾನ ಘೋಷಿಸಿದೆ.

ಅಮೆರಿಕಾ ಅಧ್ಯಕ್ಷರ ತಲೆ ಉರುಳಿಸುವ ವ್ಯಕ್ತಿಗೆ 80 ಮಿಲಿಯನ್ ಡಾಲರ್ ಹಣವನ್ನು ನೀಡಲಾಗುವುದು.
ಇರಾನ್ ನ ಪ್ರತಿಯೋಬ್ಬ ನಾಗರಿಕ ತಲಾ ಒಂದು ಡಾಲರ್ ನೀಡಿದರು ಅದು 80 ಮಿಲಿಯನ್ ಡಾಲರ್ ಆಗಲಿದ್ದು ಆ ಮೊತ್ತವನ್ನು ಟ್ರಂಪ್ ಅವರನ್ನು ಮುಗಿಸುವ ವ್ಯಕ್ತಿಗೆ ನೀಡಲಾಗುವುದು ಎಂದು ಇರಾನ್ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

ಇನ್ನು ಸೋಮವಾರ ಅಮೆರಿಕಾ ಸೇನಾ ಪಡೆಗಳ ಕ್ಷಿಪಣಿ ದಾಳಿಗೆ ಮೃತ ಪಟ್ಟ ಇರಾನ್ ಸೇನಾ ಮುಖ್ಯಸ್ಥ ಖಾಸಿಂ ಸುಲೇಮನ್ ಅವರ ಅಂತ್ಯಕ್ರಿಯೆಯ ಮೆರವಣಿಗೆ ಸೋಮವಾರ ಇಲ್ಲಿ ನಡೆದಿದ್ದು ಅಂತ್ಯಕ್ರಿಯೆಯು ಅವರ ಹುಟ್ಟೂರು ಕರ್ಮನ್‌ನಲ್ಲಿ ಮಂಗಳವಾರ ನೆರವೇರಲಿದೆ. 

ಇನ್ನು ಇರಾನ್ ಪ್ರತಿದಾಳಿ ನಡೆಸಿದರೆ ಆ ದೇಶದ ಮೇಲೆ ಅಮೆರಿಕಾ ಕಂಡು ಕೇಳರಿಯದ ರೀತಿಯಲ್ಲಿ ದಾಳಿ ನಡೆಸಲಾಗುವುದು. ಈಗಾಗಲೇ ಇರಾನ್ ನ 52 ಪ್ರಮುಖ ತಾಣಗಳ ಮೇಲೆ ದಾಳಿ ನಡೆಸಲು ಯೋಜನೆ ಸಿದ್ಧವಾಗಿದೆ ಎಂದು ಟ್ರಂಪ್ ಘೋಷಿಸಿದ್ದು ,ಉಭಯ ದೇಶಗಳ ಮಧ್ಯೆ ಯುದ್ಧದ ಕಾರ್ಮೋಡ ಕವಿದಿದೆ.

ಈ ಎಲ್ಲಾ ಬೆಳವಣಿಗೆಗಳ ಮಧ್ಯೆ ಇರಾನ್ 2015 ರಲ್ಲಿ ತಾನು ಸಹಿ ಹಾಕಿದ್ದ ಪರಮಾಣು ಒಪ್ಪಂದದಿಂದ ಹೊರ ಬರುವುದಾಗಿ ತಿಳಿಸಿದ್ದು ಇದು ಜಾಗತಿಕ ಮಟ್ಟದಲ್ಲಿ ಆತಂಕ ಉಂಟುಮಾಡಿದೆ.