Deprecated: Required parameter $uname follows optional parameter $slug in /home4/thincze7/public_html/Alma/application/models/Posts_model.php on line 419

Deprecated: Required parameter $uname follows optional parameter $slug in /home4/thincze7/public_html/Alma/application/models/Posts_model.php on line 456

Deprecated: Required parameter $uname follows optional parameter $slug in /home4/thincze7/public_html/Alma/application/models/Posts_model.php on line 481

Deprecated: Required parameter $uname follows optional parameter $slug in /home4/thincze7/public_html/Alma/application/models/Posts_model.php on line 494

Deprecated: Required parameter $uname follows optional parameter $slug in /home4/thincze7/public_html/Alma/application/models/Posts_model.php on line 519

Deprecated: Required parameter $uname follows optional parameter $slug in /home4/thincze7/public_html/Alma/application/models/Posts_model.php on line 532
Alma

ರಾಜ್ಯ ಸರ್ಕಾರದಿಂದ 'ಆಶಾ ಕಾರ್ಯಕರ್ತೆಯರಿಗೆ' ಭರ್ಜರಿ ಸಿಹಿ ಸುದ್ದಿ

ರಾಜ್ಯ ಸರ್ಕಾರದಿಂದ `ಆಶಾ ಕಾರ್ಯಕರ್ತೆಯರಿಗೆ' ಭರ್ಜರಿ ಸಿಹಿಸುದ್ದಿ.

ಆಶಾ ಕಾರ್ಯಕರ್ತೆಯರಿಗೆ ಸಚಿವ ಬಿ.ಶ್ರೀರಾಮುಲು ಸಿಹಿಸುದ್ದಿ ನೀಡಿದ್ದು, 15 ತಿಂಗಳಿಂದ ಬಾಕಿ ಇದ್ದ ಎಂಸಿಟಿಎಸ್ ಪ್ರೋತ್ಸಾಹಧನ ಬಿಡುಗಡೆ ಮಾಡುವುದಾಗಿ ಭರವಸೆ ನೀಡಿದ್ದಾರೆ.
ಜನವರಿ 3 ರಂದು ನಡೆದ ರಾಜ್ಯ ಮಟ್ಟದ ಆಶಾ ಕಾರ್ಯಕರ್ತೆಯರ ಬೃಹತ್ ಪ್ರತಿಭಟನೆ ನಡೆಸಿ, 15 ತಿಂಗಳಿಂದ ಬಾಕಿ ಇದ್ದ ಎಂಸಿಟಿಎಸ್ ಪ್ರೋತ್ಸಾಹದನ ಬಿಡುಗಡೆ ಮಾಡುವ ಬೇಡಿಕೆ ಹಾಗೆ ಉಳಿದ ಕಾರಣ ಕೆಲಸ ಸ್ಥಗಿತ ಚಳುವಳಿಗೆ ಸಂಘದಿಂದ ಕರೆ ನೀಡಲಾಗಿತ್ತು. ಹೀಗಾಗಿ ಸಚಿವರು ಪ್ರೋತ್ಸಾಹ ಧನ ಬಿಡುಗಡೆ ಮಾಡುವ ಸಂಬಂಧ ಚರ್ಚೆ ನಡೆಸಿದ್ದು, 15 ತಿಂಗಳ ಎಂಸಿಟಿಎಸ್ ಪ್ರೋತ್ಸಾಹಧನ ಬಿಡುಗಡೆ ಮಾಡುವ ಭರವಸೆ ನೀಡಿದ್ದಾರೆ.
ಸಚಿವ ಶ್ರೀರಾಮುಲು ನೀಡಿರುವ ಭರವಸೆಯನ್ನು ಪರಿಗಣಿಸಿರುವ ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದಿಂದ ಪ್ರಸ್ತುತ ನಡೆಯುತ್ತಿರುವ ಕೆಲಸ ಸ್ಥಗಿತ ಚಳುವಳಿಯನ್ನು ಹಿಂಪಡೆಯಲಾಗಿದ್ದು, ಇಂದಿನಿಂದಲೇ ಆಶಾ ಕಾರ್ಯಕರ್ತೆಯರು ಕೆಲಸಕ್ಕೆ ಮರಳಬೇಕು ಎಂದು ಆಶಾ ಕಾರ್ಯಕರ್ತೆಯರ ಸಂಘ ಘೋಷಿಸಿದೆ.